ಶಿವಮೊಗ್ಗ: ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ಚಾಲನೆ; ದೇವಿಯ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ

ಶಿವಮೊಗ್ಗ: ನಗರ ದೇವತೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಇಂದಿನಿಂದ ಫೆಬ್ರವರಿ 28ರವರೆಗೆ ಒಟ್ಟು ಐದು ದಿನ ಜಾತ್ರೆ ನಡೆಯುತ್ತದೆ.‌ ಫೆಬ್ರವರಿ 28ರಂದು ದೇವಿಯನ್ನು ವನಕ್ಕೆ ಬಿಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ಮಾರ್ಚ್ 6ರಂದು ಮಾರಿಕಾಂಬ ದೇವಾಲಯ ಸಮಿತಿ ವತಿಯಿಂದ ಬಯಲು ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.

ತವರು ಮನೆಯಲ್ಲಿ ದೇವಿಗೆ ಪೂಜೆ: ಇಂದು ಗಾಂಧಿ ಬಜಾರ್​ನ ತವರು ಮನೆಯಲ್ಲಿ ದೇವಿಗೆ ಪೂಜೆ ನಡೆಯಿತು. ಬ್ರಾಹ್ಮಣ ನಾಡಿಗರ ತವರು ಮನೆಯಿಂದ ಬಾಸಿಂಗ ತಂದು ಮದುವೆ ನೆರವೇರಿಸಲಾಯಿತು. ಮಾಂಗಲ್ಯ ಧಾರಣೆಯ ನಂತರ ದೇವಿಗೆ ಪೂಜೆ ನಡೆಯಿತು. ‌ಬ್ರಾಹ್ಮಣ, ವಿಶ್ವಕರ್ಮ ಸಮುದಾಯದವರು ದೇವಿಗೆ ಪೂಜೆ ಸಲ್ಲಿಸುವುದು ಪದ್ಧತಿ.